ರಕ್ಕಿ ಫಸ್ಟ್ ಡ್ರಾಪ್ ಬಿಡುಗಡೆ : ಸ್ಟೈಲಿಷ್ ಬಜ್‌ಗೆ ಚಾಲನೆ

ಬಹು ನಿರೀಕ್ಷಿತ ಕನ್ನಡ ಸಿನಿಮಾ ‘ರಕ್ಕಿ’ಯ ಫಸ್ಟ್ ಡ್ರಾಪ್ ಬಿಡುಗಡೆಯಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭರ್ಜರಿ ಬಜ್ ಸೃಷ್ಟಿಸಿದೆ. ‘ರಗಡೋ ರಕ್ಕಿ’ ಹೈ-ಎನರ್ಜಿ ಸ್ಟೆಪ್ ಮೂಲಕ ಹೊಸ ನಾಯಕ ರಕ್ಕಿ ಸುರೇಶ್ ಗಮನ ಸೆಳೆದಿದ್ದು, ಅಪರಾಧ ಆಧಾರಿತ ಪಕ್ಕಾ ಎಂಟರ್‌ಟೈನ್‌ಮೆಂಟ್ ಥ್ರಿಲ್ಲರ್ ಚಿತ್ರ ಮುಂದಿನ ಅಪ್ಡೇಟ್ಸ್‌ಗಾಗಿ ಸಿನಿರಸಿಕರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

Dec 19, 2025 - 10:54
Dec 19, 2025 - 11:02
 0
ರಕ್ಕಿ ಫಸ್ಟ್ ಡ್ರಾಪ್ ಬಿಡುಗಡೆ : ಸ್ಟೈಲಿಷ್ ಬಜ್‌ಗೆ ಚಾಲನೆ


ಅಪರಾಧಕ್ಕೆ ಸವಾಲು ದಿನಪತ್ರಿಕೆ

ಬೆಂಗಳೂರು: ಬಹು ನಿರೀಕ್ಷಿತ ಕನ್ನಡ ಸಿನಿಮಾ “ರಕ್ಕಿ” ಯ ಫಸ್ಟ್ ಡ್ರಾಪ್ ಅಧಿಕೃತವಾಗಿ ಬಿಡುಗಡೆಯಾಗಿ, ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟೈಲಿಷ್ ಬಜ್ ಸೃಷ್ಟಿಸಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಆಶೀರ್ವಾದದೊಂದಿಗೆ ರೂಪುಗೊಂಡಿರುವ ಈ ಚಿತ್ರವನ್ನು SNR ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುರೇಶ್ ಸಾಲಿಗ್ರಾಮ ನಿರ್ಮಿಸಿದ್ದು, ವೆಂಕಟ್ ಭಾರದ್ವಾಜ್ ನಿರ್ದೇಶನ ಮಾಡಿದ್ದಾರೆ.

ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದ “ರಗಡೋ ರಕ್ಕಿ” ಎಂಬ ಹೈ-ಎನರ್ಜಿ ಹುಕ್ ಸಿಗ್ನೇಚರ್ ಸ್ಟೆಪ್ ತನ್ನ ಹೊಸತನ ಮತ್ತು ಮಾಸ್ ಅಪೀಲ್‌ನಿಂದ ಸಿನಿರಸಿಕರ ಗಮನ ಸೆಳೆದಿದೆ. ನೃತ್ಯ ನಿರ್ದೇಶಕ ಕಂಬಿ ರಾಜು ಅವರ ಕೊರಿಯೋಗ್ರಫಿಯಲ್ಲಿ ಮೂಡಿಬಂದ ಈ ವಿಶಿಷ್ಟ ಸ್ಟೆಪ್ ಅನ್ನು ನಾಯಕ ರಕ್ಕಿ ಸುರೇಶ್ ಅತ್ಯಂತ ಆತ್ಮವಿಶ್ವಾಸದಿಂದ ಪ್ರದರ್ಶಿಸಿದ್ದು, ಹೊಸ ನಾಯಕನ ಶಕ್ತಿಯುತ ಪರಿಚಯಕ್ಕೆ ಸಾಕ್ಷಿಯಾಗಿದೆ.

ಚಿತ್ರದ ಎಲ್ಲಾ ಟಾಕಿ ಭಾಗಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಸ್ತುತ ಡಬ್ಬಿಂಗ್ ಹಂತಕ್ಕೆ ಪ್ರವೇಶಿಸಿದೆ. ಶೀಘ್ರದಲ್ಲೇ ಬೆಂಗಳೂರು ಹೊರಗೆ ತೆರಳಿ ಚಿತ್ರದ ಎರಡು ಪ್ರಮುಖ ಹಾಡುಗಳ ಚಿತ್ರೀಕರಣ ನಡೆಸಲು ತಂಡ ಸಜ್ಜಾಗಿದೆ. ಈ ಹಾಡುಗಳು ಚಿತ್ರದ ಪ್ರಮುಖ ಹೈಲೈಟ್‌ಗಳಾಗಲಿವೆ ಎಂಬ ನಿರೀಕ್ಷೆಯಿದೆ.

“ರಕ್ಕಿ” ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಥ್ರಿಲ್ಲರ್ ಆಗಿದ್ದು, ಅಪರಾಧ ಆಧಾರಿತ ಕಥಾವಸ್ತುವಿನೊಂದಿಗೆ ಬಲಿಷ್ಠ ಕಮರ್ಷಿಯಲ್ ನಿರೂಪಣೆಯನ್ನು ಹೊಂದಿದೆ. ನಾಯಕನಾಗಿ ರಕ್ಕಿ ಸುರೇಶ್, ನಾಯಕಿಯರಾಗಿ ಆಶಿಕಾ ಸೋಮಶೇಖರ್ಮತ್ತು ಪಲ್ಲವಿ ಮಂಜುನಾಥ್ ಅಭಿನಯಿಸಿದ್ದಾರೆ. ಜೊತೆಗೆ ಬಿ. ಸುರೇಶ್, ಸಂಪತ್ ಮೈತ್ರೇಯ, ಬಲರಾಜ್ ವಾಡಿ, ರಮೇಶ್ ಪಂಡಿತ್, ಹರಿಣಿ ಶ್ರೀಕಾಂತ್, ಹರ್ಷ ಅರ್ಜುನ್, ಡಾ. ಸುಧಾಕರ್ ಶೆಟ್ಟಿ, ಸೂರಜ್ ಕಿರಣ್ ಸೇರಿದಂತೆ ಅನೇಕ ಹಿರಿಯ ಹಾಗೂ ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರದ ತಾಂತ್ರಿಕ ಬಳಗದಲ್ಲಿ ಅನುಭವಸಂಪನ್ನರು ಸೇರಿದ್ದಾರೆ.

ಕಥೆ–ಚಿತ್ರಕಥೆ–ಸಂಭಾಷಣೆ–ನಿರ್ದೇಶನ: ವೆಂಕಟ್ ಭಾರದ್ವಾಜ್

ಸಂಗೀತ: ಲೋಕಿ ತವಸ್ಯ

ಛಾಯಾಗ್ರಹಣ: ಐಸಾಕ್ ಪ್ರಭಾಕರ್

ಸಂಕಲನ: ದೀಪು ಎಸ್. ಕುಮಾರ್

ಸಹ ನಿರ್ದೇಶಕ: ಲಾರೆನ್ಸ್

ಸ್ಟಂಟ್ಸ್: ಶಿವ

ನೃತ್ಯ ನಿರ್ದೇಶನ: ಕಂಬಿ ರಾಜು & ಹೈಟ್ ಮಂಜು

ಬಲಿಷ್ಠ ಕಥಾವಸ್ತು, ಉತ್ಸಾಹಭರಿತ ನಿರೂಪಣೆ ಮತ್ತು ಹೊಸ ಮುಖದೊಂದಿಗೆ “ರಕ್ಕಿ” ಕನ್ನಡ ಸಿನಿರಸಿಕರಿಗೆ ವಿಭಿನ್ನ ಅನುಭವ ನೀಡುವ ಭರವಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಚಿತ್ರದ ಇನ್ನಷ್ಟು ಅಪ್ಡೇಟ್ಸ್ ಹಾಗೂ ಪ್ರಚಾರ ಸಾಮಗ್ರಿಗಳು ಬಿಡುಗಡೆಯಾಗಲಿವೆ.