1.14 ಕೋಟಿ ಸಮೇತ ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ : ಪೊಲೀಸರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶ್ಲಾಘನೆ

Dec 5, 2025 - 17:13
Dec 5, 2025 - 17:15
 0
1.14 ಕೋಟಿ ಸಮೇತ ಆರೋಪಿಗಳ ಹೆಡೆಮುರಿ ಕಟ್ಟಿದ ಖಾಕಿ : ಪೊಲೀಸರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಶ್ಲಾಘನೆ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ 

  • ಎಲಿಗನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಮನೆಕಳವು
  • ಆರೋಪಿಗಳಿಂದ ನಗದು, ಚಿನ್ನ ವಶ
  • ಸಿಸಿ ಕ್ಯಾಮೆರಾ ಸುಳಿವಿನಿಂದ ಸುಳಿವು ಸಿಕ್ಕ ಪೊಲೀಸರು ಯಶಸ್ವಿ ಬಲೆ

ಬೆಂಗಳೂರು ಗ್ರಾಮಾಂತರ: ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಮಂಗಲದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಒಂದು ಕೋಟಿ 14 ಲಕ್ಷ ನಗದು ಮತ್ತು 16 ಗ್ರಾಂ ಚಿನ್ನದ ಸರ ಕಳವು ಪ್ರಕರಣವನ್ನು ಬಗೆದು, ಆರೋಪಿಗಳಿಂದ ವಶಪಡಿಸಿಕೊಳ್ಳುವಲ್ಲಿ ಹೆಬ್ಬಗೋಡಿ ಪೊಲೀಸರು ಮಹತ್ವದ ಸಾಧನೆ ಮಾಡಿದ್ದಾರೆ.

ಬಂಧಿತರನ್ನು ಬೆಂಗಳೂರು ಸುಂಕದಕಟ್ಟೆಯ ಶ್ರೀನಿವಾಸ್ ಮೂರ್ತಿ (39) ಹಾಗೂ ದಾಸನಪುರದ ಚಿಕ್ಕ ಗೊಲ್ಲರಹಟ್ಟಿಯ ಅರುಣ್ ಕುಮಾರ್ (39) ಎಂದು ಗುರುತಿಸಲಾಗಿದೆ.

  • ನವೆಂಬರ್ 8ರಂದು ಮನೆಗೆ ನುಗ್ಗಿದ ಕಳ್ಳರು

ನವೆಂಬರ್ 8 ರಂದು ಹುಲಿಮಂಗಲದ ಎಲಿಗನ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಮನೆಯವರು ಹೊರಗಿದ್ದ ವೇಳೆ ಕಳ್ಳರು ಮನೆಗೆ ನುಗ್ಗಿ ನಗದು ಮತ್ತು ಚಿನ್ನ ದೋಚಿಕೊಂಡು ಪರಾರಿಯಾಗಿದ್ದರು.

ನವೆಂಬರ್ 9ರಂದು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ ನಂತರ, ಪೊಲೀಸರು ವಿಭಿನ್ನ ದಿಕ್ಕುಗಳಲ್ಲಿ ತನಿಖೆ ಪ್ರಾರಂಭಿಸಿದ್ದರು.

  • ಸಿಸಿ ಕ್ಯಾಮೆರಾ ಸುಳಿವಿನಿಂದ ಬಂಧನ

ಆರೋಪಿಗಳ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ನಿಗಾವಹಿಸಿ ಆರೋಪಿಗಳ ಬೆನ್ನಟ್ಟಿ, ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಪೊಲೀಸ್ ಮೂಲಗಳ ಪ್ರಕಾರ, ಕಳುವಾದ ಒಂದು ಕೋಟಿಗೂ ಹೆಚ್ಚು ನಗದು ಮತ್ತು ಚಿನ್ನದ ಸರವನ್ನು ಆರೋಪಿಗಳ ವಶದಿಂದ ವಾಪಸು ಪಡೆಯಲಾಗಿದೆ.

  • ಉನ್ನತಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್, ಎಸಿಪಿ ಸತೀಶ್ ಅವರ ಮಾರ್ಗದರ್ಶನದಲ್ಲಿ ಹೆಬ್ಬಗೋಡಿ ಪೊಲೀಸ್ ಇನ್ಸ್‌ಪೆಕ್ಟರ್ ಜಿ. ಸೋಮಶೇಖರ್, ಸಬ್ ಇನ್ಸ್‌ಪೆಕ್ಟರ್ ಅಯ್ಯಪ್ಪ, ಸಿಬ್ಬಂದಿಗಳಾದ ಮಹಾಂತೇಶ್ ಗೌಡ, ಸಂತೋಷ್, ಪ್ರವೀಣ್, ವೇಣುಗೋಪಾಲ್, ಅಶೋಕ್, ನಾಗೇಶ್, ಆನಂದ್, ಮುರುಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

  • ಪೊಲೀಸರ ಕಾರ್ಯಕ್ಕೆ ಶ್ಲಾಘನೆ

ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಖಾಕಿ ಪಡೆ ನೀಡಿದ ಶೀಘ್ರ ಮತ್ತು ಪರಿಣಾಮಕಾರಿ ಕೆಲಸವನ್ನು ಶ್ಲಾಘಿಸಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.