ಸೈಬರ್ ಕ್ರೈಮ್ ನಿಯಂತ್ರಣದಲ್ಲಿ ಕರ್ನಾಟಕ ಮುಂಚೂಣಿ: ಗೃಹ ಸಚಿವ ಜಿ.ಪರಮೇಶ್ವರ್
Karnataka is at the forefront in controlling cybercrime: Home Minister G. Parameshwar
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
- ಸೈಬರ್ ಕ್ರೈಮ್ ವಿಭಾಗಕ್ಕೆ ಪ್ರತ್ಯೇಕ ಡಿಜಿಪಿ ನೇಮಕ — ದೇಶದಲ್ಲಿ ಮೊದಲ ಬಾರಿ
- ಡಿಜಿಟಲ್ ಅರೆಸ್ಟ್, ಟ್ರೇಡಿಂಗ್ ವಂಚನೆ ಪ್ರಕರಣಗಳ ಕುಸಿತ
- ಕಳೆದ ವರ್ಷಕ್ಕಿಂತ 9 ಸಾವಿರ ಪ್ರಕರಣಗಳು ಕಡಿಮೆ
- 1930 ಹೆಲ್ಪ್‌ಲೈನ್ ಮೂಲಕ ದೂರು ಸ್ವೀಕಾರ — 66 ಸಿಬ್ಬಂದಿ ಕರ್ತವ್ಯದಲ್ಲಿ
- ಆನ್‌ಲೈನ್ ವಂಚಕರ ಮೇಲೆ ರಾಜ್ಯ ಪೊಲೀಸ್ ಇಲಾಖೆ ಆಪರೇಷನ್ ಯಶಸ್ವಿ
ಬೆಂಗಳೂರು: ದೇಶದಲ್ಲಿ ಸೈಬರ್ ಅಪರಾಧಗಳು ದಿನೇದಿನೇ ಹೆಚ್ಚುತ್ತಿರುವ ನಡುವೆ, ಕರ್ನಾಟಕದಲ್ಲಿ ಮಾತ್ರ ಡಿಜಿಟಲ್ ವಂಚನೆ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿರುವುದು ಗೃಹ ಸಚಿವ ಜಿ. ಪರಮೇಶ್ವರ್ ಅವರ ಸ್ವಯಂ ಬಹಿರಂಗಪಡಿಸಿರುವ ಅಂಕಿ–ಅಂಶಗಳಿಂದ ತಿಳಿದುಬಂದಿದೆ.
ಡಿಜಿಟಲ್ ಅರೆಸ್ಟ್, ಆನ್‌ಲೈನ್ ಟ್ರೇಡಿಂಗ್ ವಂಚನೆ ಸೇರಿದಂತೆ ವಿದ್ಯಾವಂತರೇ ಸದ್ಯ ಹೆಚ್ಚು ಸೈಬರ್ ಕ್ರೈಮ್ ಬಲಿಯಾಗುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲಿ ಇಳಿಕೆ ಕಂಡಿರುವುದು ಗಮನಾರ್ಹ.
ಸೈಬರ್ ಅಪರಾಧ ನಿಯಂತ್ರಣಕ್ಕಾಗಿ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸೈಬರ್ ಕ್ರೈಮ್ ವಿಭಾಗಕ್ಕೆ ಪ್ರತ್ಯೇಕ ಡಿಜಿಪಿ ನೇಮಕ ಮಾಡಲಾಗಿದೆ. ಸೈಬರ್ ಕ್ರೈಮ್ ಠಾಣೆಗಳ ಸಂಖ್ಯೆಯನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳ ದಾಖಲಾತಿಯೂ ಹೆಚ್ಚಿತ್ತು. ಅಮೆರಿಕದಲ್ಲಿ ನೆಲೆಸಿದ್ದವರನ್ನು ಡಿಜಿಟಲ್ ಅರೆಸ್ಟ್ ಮಾಡಿದಂತೆ ನಂಬಿಸಿ ಹಣ ಕಸಿದುಕೊಂಡ ಡಿಜಿಟಲ್ ವಂಚಕರನ್ನೂ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಈ ಎಲ್ಲಾ ಕ್ರಮಗಳ ಪರಿಣಾಮವಾಗಿ ಸದ್ಯ ರಾಜ್ಯದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು 13,000ಕ್ಕೆ ಇಳಿದಿವೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.
ವರ್ಷವಾರಿನ ಸೈಬರ್ ಅಪರಾಧ ಪ್ರಕರಣಗಳು
• 2022: 12,550
• 2023: 21,903
• 2024: 21,995
• 2025: 13,000
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದಲ್ಲಿ ಸುಮಾರು 9 ಸಾವಿರ ಪ್ರಕರಣಗಳು ಕಡಿಮೆಯಾಗಿವೆ. ಆನ್‌ಲೈನ್ ವಂಚನೆಗೆ ಒಳಗಾದವರು ತಕ್ಷಣವೇ 1930 ಹೆಲ್ಪ್‌ಲೈನ್‌ಗೆ ಕರೆ ಮಾಡಿ ಮನವಿ ಸಲ್ಲಿಸಬಹುದಾಗಿದೆ. ಈ ಕರೆಗಳನ್ನು ಸ್ವೀಕರಿಸಲು 66 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸೈಬರ್ ಅಪರಾಧ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಕಲ ಕ್ರಮಗಳನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.


