ಯಶವಂತಪುರ–ವಿಜಯಪುರ ರೈಲು ಖಾಯಂ: ಟಿಕೆಟ್ ದರದಲ್ಲಿ ಭಾರೀ ಇಳಿಕೆ
ಬೆಂಗಳೂರು–ವಿಜಯಪುರ ನಡುವೆ ಸಂಚರಿಸುವ ರೈಲು ಈಗ ಖಾಯಂ ಸೇವೆಯಾಗಿ ಪರಿವರ್ತನೆಯಾಗಿದ್ದು, ಸ್ಲೀಪರ್ ಹಾಗೂ ಜನರಲ್ ಟಿಕೆಟ್ ದರಗಳಲ್ಲಿ ಭಾರೀ ಕಡಿತ ಮಾಡಲಾಗಿದೆ. ಪ್ರಯಾಣಿಕರಿಗೆ ಇದು ದೊಡ್ಡ ರಿಲೀಫ್ ಆಗಿದೆ.
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು: ಉತ್ತರ ಕರ್ನಾಟಕ ಜಿಲ್ಲೆಗಳ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಲಭ್ಯವಾಗಿದೆ. ಬೆಂಗಳೂರು–ವಿಜಯಪುರ ನಡುವೆ ಸಂಚಾರ ನಡೆಸುತ್ತಿದ್ದ ಯಶವಂತಪುರ–ವಿಜಯಪುರ ವಿಶೇಷ ರೈಲು ಡಿಸೆಂಬರ್ 8ರಿಂದ ಖಾಯಂ ರೈಲಾಗಿ ಪರಿವರ್ತನೆಯಾಗಲಿದೆ. ಈ ಬೆಳವಣಿಗೆಯೊಂದಿಗೆ ಇದುವರೆಗೆ ಹೆಚ್ಚುವರಿಯಾಗಿ ವಿಧಿಸಲಾಗುತ್ತಿದ್ದ ಟಿಕೆಟ್ ದರಗಳಲ್ಲಿ ಗಮನಾರ್ಹ ಇಳಿಕೆಯಾಗಿದ್ದು, ಪ್ರಯಾಣಿಕರಿಗೆ ಆರ್ಥಿಕ ನಿರಾಳತೆಯನ್ನು ತಂದಿದೆ.
ಟಿಕೆಟ್ ದರಗಳಲ್ಲಿ ಭಾರೀ ಇಳಿಕೆ
ಇದೀಗ ಬೆಂಗಳೂರು ರಿಂದ ವಿಜಯಪುರ ಮಾರ್ಗದಲ್ಲಿ ನಿತ್ಯ ಮೂರು ರೈಲುಗಳು ಲಭ್ಯವಿವೆ. ಗೋಲ್‌ಗುಂಬಜ್ ಎಕ್ಸ್‌ಪ್ರೆಸ್ಹಾಗೂ ಬಸವ ಎಕ್ಸ್‌ಪ್ರೆಸ್ ಈಗಾಗಲೇ ಖಾಯಂ ರೈಲುಗಳಾಗಿದ್ದು, ಸಾಮಾನ್ಯ ಎಕ್ಸ್‌ಪ್ರೆಸ್ ದರದಲ್ಲಿಯೇ ಸಂಚರಿಸುತ್ತಿದ್ದವು. ಆದರೆ ಯಶವಂತಪುರ–ವಿಜಯಪುರ ವಿಶೇಷ ರೈಲಿಗೆ ಶೇ.25–30ರಷ್ಟು ಹೆಚ್ಚುವರಿ ದರ ವಿಧಿಸಲಾಗುತ್ತಿತ್ತು. ಈಗ ಅದು ಖಾಯಂ ರೈಲಾಗಿರುವುದರಿಂದ ಈ ಹೆಚ್ಚುವರಿ ಶುಲ್ಕ ರದ್ದುಗೊಂಡಿದೆ.
ಮಾರ್ಗ ಮಧ್ಯದ ದಾವಣಗೆರೆ, ಹೊಸಪೇಟೆ ಸೇರಿದಂತೆ ಹಲವು ನಿಲ್ದಾಣಗಳ ಪ್ರಯಾಣಿಕರು ಹಿಂದೆ ಶೇ.30–35ರಷ್ಟು ಹೆಚ್ಚುವರಿ ದರ ಪಾವತಿಸಬೇಕಾದ ಪರಿಸ್ಥಿತಿ ಇತ್ತು. ಇದೀಗ ಆ ದರ ಕಡಿತಗೊಂಡಿದೆ.
ಸ್ಲೀಪರ್ ಟಿಕೆಟ್ ದರ – ಹಳೆಯದು vs ಹೊಸದು
- ಜನರಲ್ ಟಿಕೆಟ್‌ಗಳಲ್ಲೂ ಸಣ್ಣ ಇಳಿಕೆ
ಬೆಂಗಳೂರು – ವಿಜಯಪುರ ನಡುವಿನ ಜನರಲ್ ಟಿಕೆಟ್ ದರ 225 ರೂ.ನಿಂದ 215 ರೂ.ಗಳಿಗೆ ಇಳಿಕೆಯಾಗಿದೆ. ಇತರ ನಿಲ್ದಾಣಗಳ ನಡುವೆ 10ರಿಂದ 15 ರೂಪಾಯಿವರೆಗೆ ದರ ಕಡಿಮೆ ಮಾಡಲಾಗಿದೆ.
- ರೈಲು ಸಂಖ್ಯೆ ಬದಲಾವಣೆ
• ಬೆಂಗಳೂರು → ವಿಜಯಪುರ: 06545 → 16547 (ಡಿಸೆಂಬರ್ 8ರಿಂದ)
• ವಿಜಯಪುರ → ಬೆಂಗಳೂರು: 06546 → 16548 (ಡಿಸೆಂಬರ್ 9ರಿಂದ)
- ವೇಳಾಪಟ್ಟಿಯಲ್ಲಿ ಬದಲಾವಣೆ ಇಲ್ಲ
ರೈಲಿನ ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಯಶವಂತಪುರದಿಂದ ಹೊರಡುವುದು: ರಾತ್ರಿ 9.30
ದಾವಣಗೆರೆ: ಮಧ್ಯರಾತ್ರಿ 1.45
ಹೊಸಪೇಟೆ: ಬೆಳಿಗ್ಗೆ 5.50
ಬಾಗಲಕೋಟೆ: ಬೆಳಿಗ್ಗೆ 9.08
ಆಲಮಟ್ಟಿ: ಬೆಳಿಗ್ಗೆ 9.45
ವಿಜಯಪುರ: ಬೆಳಿಗ್ಗೆ 11.25
ವಿಜಯಪುರದಿಂದ ಹೊರಡುವುದು: ಮಧ್ಯಾಹ್ನ 1.50
ಹೊಸಪೇಟೆ: ಸಂಜೆ 7.20
ದಾವಣಗೆರೆ: ರಾತ್ರಿ 11.15
ಬೆಂಗಳೂರು (ಯಶವಂತಪುರ): ಬೆಳಿಗ್ಗೆ 5.10
- ಬೋಗಿಗಳ ವಿವರ
• ಜನರಲ್ ಕೋಚ್‌ಗಳು – 5
• ಸ್ಲೀಪರ್ ಕೋಚ್‌ಗಳು – 4
• ಎಸಿ (B1) – 1
• ಎಸ್‌ಎಲ್‌ಆರ್ – 1
- ಪ್ರಮುಖ ನಿಲ್ದಾಣಗಳು
ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಹೊಸದುರ್ಗ, ಚಿಕ್ಕಜಾಜೂರು, ದಾವಣಗೆರೆ, ಹರಪನಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ, ಹೊಸಪೇಟೆ, ಕೊಪ್ಪಳ, ಗದಗ, ಮಲ್ಲಾಪುರ, ಹೊಳೆಆಲೂರು, ಬಾದಾಮಿ, ಗುಳೇದಗುಡ್ಡ ರೋಡ್, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್, ವಿಜಯಪುರ.
ವಿಶೇಷ ರೈಲು ಖಾಯಂ ಆಗಿರುವುದರಿಂದ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಈಗ ಕಡಿಮೆ ದರದಲ್ಲಿ ಸುಲಭ ಪ್ರಯಾಣ ಸಾಧ್ಯವಾಗುತ್ತಿದೆ.


