ರುದ್ರ ಕಾಲ ಚಿತ್ರಕ್ಕೆ ದಿಗಂತ್ ನಾಯಕ : ಶೀರ್ಷಿಕೆ ಅನಾವರಣ ಮಾಡಿದ ಸಮಂತ

ನಟ ದಿಗಂತ್ ಅಭಿನಯದ “ರುದ್ರ ಕಾಲ” ಚಿತ್ರದ ಶೀರ್ಷಿಕೆಯನ್ನು ನಟಿ ಸಮಂತಾ ಬಿಡುಗಡೆ ಮಾಡಿದ್ದಾರೆ. ಗೋಪಿ ನಿರ್ದೇಶನದ ಈ ಚಿತ್ರವನ್ನು ರಮೇಶ್ ನಾಯ್ಕ್ ನಿರ್ಮಿಸುತ್ತಿದ್ದು, ಮುಹೂರ್ತ ಏಪ್ರಿಲ್ 22ರಂದು ನಡೆಯಲಿದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಒಂದೇ ಸಮಯದಲ್ಲಿ ಚಿತ್ರೀಕರಣ ಮಾಡಿ ಶೀಘ್ರದಲ್ಲೇ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡ ಹೊಂದಿದೆ.

Apr 15, 2026 - 12:35
Apr 15, 2026 - 12:36
 0
ರುದ್ರ ಕಾಲ ಚಿತ್ರಕ್ಕೆ ದಿಗಂತ್ ನಾಯಕ : ಶೀರ್ಷಿಕೆ ಅನಾವರಣ ಮಾಡಿದ ಸಮಂತ

ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ

ಬೆಂಗಳೂರು: ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ದಿಗಂತ್ ಅಭಿನಯದ ನೂತನ ಚಿತ್ರ “ರುದ್ರ ಕಾಲ” ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ. ಇತ್ತೀಚೆಗೆ ಈ ಚಿತ್ರದ ಶೀರ್ಷಿಕೆಯನ್ನು ಸ್ಟಾರ್ ಹಿರೋಯಿನ್ ಸಮಂತಾ ಬಿಡುಗಡೆ ಮಾಡಿ, ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.

ರಮೇಶ್ ನಾಯ್ಕ್ ನಿರ್ಮಾಣ ಮಾಡುತ್ತಿರುವ ಈ ಚಿತ್ರವನ್ನು ನಿರ್ದೇಶಕ ಗೋಪಿ ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇದೇ ತಿಂಗಳ 22ರಂದು ನಡೆಯಲಿದೆ.

ಚಿತ್ರದ ಕುರಿತು ಮಾತನಾಡಿದ ನಟ ದಿಗಂತ್, “ನಮ್ಮ ಡೈರೆಕ್ಟರ್ ಗೋಪಿ ಅವರು ಕಥೆ ಹೇಳುತ್ತಿದ್ದಾಗಲೇ ಈ ಚಿತ್ರದಲ್ಲಿ ನಟಿಸಬೇಕೆಂದು ನಿರ್ಧಾರ ಮಾಡಿದೆ. ‘ರುದ್ರ ಕಾಲ’ ಚಿತ್ರದ ಟೈಟಲ್ ಸಮಂತಾ ಅವರ ಕೈಯಿಂದ ಬಿಡುಗಡೆ ಆಗಿರುವುದು ನನಗೆ ತುಂಬಾ ಸಂತೋಷ ತಂದಿದೆ. ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ” ಎಂದು ಹೇಳಿದ್ದಾರೆ. ಜೊತೆಗೆ ನಿರ್ದೇಶಕ ಗೋಪಿ, ನಿರ್ಮಾಪಕ ರಮೇಶ್ ನಾಯ್ಕ್ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ದೇಶಕ ಗೋಪಿ ಮಾತನಾಡಿ, “ನಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಸಮಂತಾ ಅವರಿಗೆ ಧನ್ಯವಾದಗಳು. ಇದು ನಮ್ಮ ಚಿತ್ರದ ಶುಭಾರಂಭ. ‘ರುದ್ರ ಕಾಲ’ ಚಿತ್ರದ ಚಿತ್ರೀಕರಣ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿ ಶೀಘ್ರದಲ್ಲೇ ತೆರೆಗೆ ತರುವ ಯೋಜನೆ ಇದೆ. ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ” ಎಂದು ತಿಳಿಸಿದ್ದಾರೆ.

ನಿರ್ಮಾಪಕ ರಮೇಶ್ ನಾಯ್ಕ್ ಹೇಳುವಂತೆ, “ಡೈರೆಕ್ಟರ್ ಗೋಪಿ ಹೇಳಿದ ಕಥೆ ತುಂಬಾ ಹೊಸತಾಗಿ ಅನಿಸಿತು. ನಮ್ಮ ಬ್ಯಾನರ್‌ನಲ್ಲಿ ಇಂತಹ ಚಿತ್ರ ನಿರ್ಮಾಣವಾಗುತ್ತಿರುವುದು ಸಂತೋಷಕರ. ಟೈಟಲ್ ಬಿಡುಗಡೆ ಮಾಡಿದ ಸಮಂತಾ ಹಾಗೂ ನಾಯಕ ದಿಗಂತ್ ಅವರಿಗೆ ಧನ್ಯವಾದಗಳು” ಎಂದಿದ್ದಾರೆ.

ಈ ಚಿತ್ರಕ್ಕೆ ರಮೇಶ್ ನಾಯ್ಕ್ ಕಥೆ ಬರೆದಿದ್ದು, ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಲೈನ್ ಪ್ರೊಡ್ಯೂಸರ್ ಆಗಿ ನವೀನ್, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಶಿವರಾಜ್ ಕಾರ್ಯನಿರ್ವಹಿಸುತ್ತಿದ್ದಾರೆ. ರಮೇಶ್ ಕೆ ಪೂಜಾರಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

Vishwaprakash T Malagond ವಿಶ್ವಪ್ರಕಾಶ ಟಿ ಮಲಗೊಂಡ, 2020-2023 ಪತ್ರಿಕೆಯಲ್ಲಿ ಹವ್ಯಾಸಿ ಬರಹಗಾರರಾಗಿ ಕಾರ್ಯನಿರ್ವಹಣೆ. ಪ್ರಸ್ತುತ "ಅಪರಾಧಕ್ಕೆ ಸವಾಲು" ಕನ್ನಡ ದಿನಪತ್ರಿಕೆಯ ಉಪಸಂಪಾದಕ.