ಡಿಸೆಂಬರ್ 15ಕ್ಕೆ 45 ಚಿತ್ರದ ಟ್ರೈಲರ್ ಬಿಡುಗಡೆ : ನಿರ್ದೇಶಕ ಅರ್ಜುನ್ ಜನ್ಯ
Trailer of 45 to be released on December 15: Director Arjun Janya
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟ-ನಿರ್ದೇಶಕ ರಾಜ್ ಬಿ ಶೆಟ್ಟಿ ನಟಿಸಿರುವ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಸಿನಿಮಾ ‘45’ ಟ್ರೈಲರ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಚಿತ್ರ ತಂಡ ಡಿಸೆಂಬರ್ 15 ರಂದು ಟ್ರೈಲರ್ ರಿಲೀಸ್ ಮಾಡುವುದಾಗಿ ಘೋಷಿಸಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.
ವಿದ್ಯಾಪೀಠ ಸರ್ಕಲ್‌ನಲ್ಲಿ ಭಾರೀ ಇವೆಂಟ್‌ನೊಂದಿಗೆ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದ್ದು, ಮೈಸೂರಿಂದ ಮಂಗಳೂರು, ಶಿವಮೊಗ್ಗ, ತುಮಕೂರು, ದಾವಣಗೆರೆ, ಹೊಸಪೇಟೆ, ಹುಬ್ಬಳ್ಳಿ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಒಂದೇ ಸಮಯದಲ್ಲಿ ಈ ಲಾಂಚ್ ಇವೆಂಟ್ ಪ್ಲೇ ಮಾಡುವ ಯೋಜನೆ ಮಾಡಿದ್ದಾರೆ.
ಅಭಿಮಾನಿಗಳಿಗೆ ವಿಶೇಷ ಪಾಸ್‌ಗಳನ್ನು ನೀಡಿ, ಥಿಯೇಟರ್‌ಗಳಲ್ಲಿ ಕ್ಯೂಬ್ ತಂತ್ರಜ್ಞಾನ ಮೂಲಕ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.
ಗುರುವಾರ ಮಲ್ಲೇಶ್ವರಂನ ಎಸ್ ಆರ್ ವಿ ಥೀಯೇಟರ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೊದಲ ಬಾರಿಗೆ ಟ್ರೈಲರ್ ಲಾಂಚ್‌ಗೆ ತಂತ್ರಜ್ಞಾನವನ್ನು ಬಳಸಿ ಜಿಲ್ಲೆಗಳ ಅಭಿಮಾನಿಗಳನ್ನು ಒಂದೇ ವೇದಿಕೆಯಲ್ಲಿ ಕನೆಕ್ಟ್ ಮಾಡುವ ಪ್ರಯತ್ನ ಚಿತ್ರತಂಡದಿಂದ ನಡೆಯುತ್ತಿದೆ ಎಂದರು.
ನಂತರ ಮಾತನಾಡಿದ ನಿರ್ಮಾಪಕ ರಮೇಶ ರೆಡ್ಡಿ ಚಿತ್ರದ ಕಂಟೆಂಟ್ ಕುರಿತು ತಿಳಿಸಿದ ಅವರು ಈ ರೀತಿಯಲ್ಲಿ ಕಂಟೆಂಟ್ ಎಲ್ಲಿಯೂ ಬಂದಿಲ್ಲ. ತುಂಬಾ ವಿಶೇಷವಾಗಿ ಈ ಚಿತ್ರ ಮೂಡಿಬಂದಿದೆ. ಪ್ರತಿ ಹಂತದಲ್ಲೂ ತುಂಬಾ ರಿಸ್ಕ್ ತಗೊಂಡು ಈ ಚಿತ್ರ ಮಾಡಿದ್ದೇವೆ. ಟ್ರೈಲರ್ ರಿಲೀಸ್ ಇವೆಂಟ್ ದಿನ ವಿಶೇಷ ಕಾದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನವರಸನ ಭಾಗಿಯಾಗಿದ್ದರು.
- ಟ್ರೈಲರ್ ಲಾಂಚ್‌ಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ
‘45’ ಚಿತ್ರದ ಟ್ರೈಲರ್ ಲಾಂಚ್‌ಗೆ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ರಾಜ್ಯದ ಅನೇಕ ಜಿಲ್ಲೆಗಳ ಅಭಿಮಾನಿಗಳನ್ನು ಒಂದೇ ವೇದಿಕೆಗೆ ತರಲು ಚಿತ್ರತಂಡ ಮುಂದಾಗಿದೆ.
ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ—ಈ ಮೂವರು ಸ್ಟಾರ್‌ಗಳು ಎಲ್ಲಾ ಜಿಲ್ಲೆಯ ಫ್ಯಾನ್ಸ್‌ನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
- ಸಂಗೀತ ನಿರ್ದೇಶಕ ಈಗ ಸಿನಿಮಾ ನಿರ್ದೇಶಕ
ಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ‘45’ ಚಿತ್ರದ ಮೂಲಕ ನಿರ್ದೇಶಕ ಆಗಿ ಪರಿಚಯವಾಗುತ್ತಿದ್ದಾರೆ.
ಐದು ಭಾಷೆಗಳಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದ್ದು, ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ.
₹100 ಕೋಟಿಯ ಭಾರೀ ಬಜೆಟ್‌ನ ಸಿನಿಮಾ
ಸುಮಾರು 100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ‘45’, ಈ ವರ್ಷದ ಪ್ರಮುಖ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿದೆ.
ಸತ್ಯಾ ಹೆಗ್ಡೆ ಅವರ ಛಾಯಾಗ್ರಹಣ, ಅನಿಲ್ ಕುಮಾರ್ ಸಂಭಾಷಣೆ ಚಿತ್ರಕ್ಕೆ ಬಲ ನೀಡಿದ್ದಾರೆ.
‘ಆಫ್ರೋ ಟಪಾಂಗ್’ ಸಾಂಗ್ ಭಾರಿ ವೈರಲ್
ಚಿತ್ರದ ಪ್ರಥಮ ಪ್ರಮೋಷನಲ್ ಸಾಂಗ್ ‘ಆಫ್ರೋ ಟಪಾಂಗ್’ ಈಗಾಗಲೇ ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಆಫ್ರಿಕಾದ ಘೆಟ್ಟೋ ಕಿಡ್ಸ್ ಜೊತೆಗೆ ಮೂರು ಸ್ಟಾರ್‌ಗಳು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಹಾಡಿಗೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
- ಡಿಸೆಂಬರ್ 25 ರಂದು ದೇಶಾದ್ಯಂತ ರಿಲೀಸ್
‘45’ ಸಿನಿಮಾ ಡಿಸೆಂಬರ್ 25ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.
ಚಿತ್ರದ ಬಗ್ಗೆ ಜನರಲ್ಲಿ ಈಗಾಗಲೇ ಜ್ವರದ ಮಟ್ಟಿನ ನಿರೀಕ್ಷೆ ಮೂಡಿದೆ.


