ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯಲ್ಲ ಎಂದ ಡೆವಿಲ್
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು: ಬಹುನಿರೀಕ್ಷಿತ ‘ಡೆವಿಲ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಧನುಷ್ ಎಂಬ ಅಗ್ರೆಸ್ಸಿವ್ ಪಾತ್ರದಲ್ಲಿ ನಟಿಸಿರುವ ದರ್ಶನ್, ಈ ಟ್ರೈಲರ್‌ನಲ್ಲಿ “ನಾನು ಬರ್ತಿನಿ ಚಿನ್ನಾ” ಎಂಬ ಡೈಲಾಗ್ ಮೂಲಕ ಅಭಿಮಾನಿಗಳಿಗೆ ಸ್ಟ್ರಾಂಗ್ ಮೆಸೇಜ್ ನೀಡಿದ್ದಾರೆ.
ಮಿಲನ ಪ್ರಕಾಶ್ ನಿರ್ದೇಶನದ ಈ ಟ್ರೈಲರ್‌ನಲ್ಲಿ ದರ್ಶನ್ ಪಾತ್ರದ ಎರಡು ಶೇಡ್‌ಗಳನ್ನು ತೋರಿಸಲಾಗಿದ್ದು, “ಡೆವಿಲ್”ಅನ್ನೋ ಟ್ಯಾಗ್‌ಗೆ ಕಾರಣವೇನು ಎಂದು ಪ್ರಶ್ನೆ ಹುಟ್ಟಿಸುವ ರೀತಿಯಲ್ಲಿದೆ.
- ಪಂಚ್ ಡೈಲಾಗ್‌ಗಳ ಅಬ್ಬರ
ಟ್ರೈಲರ್‌ನಲ್ಲಿರುವ ಅನೇಕ ಡೈಲಾಗ್‌ಗಳು ಈಗಾಗಲೇ ಟ್ರೆಂಡ್ ಆಗುತ್ತಿದ್ದವೆ.
“ಬ್ರದರ್ ಫ್ರಾಂಮ್ ಅನದರ್ ಮದರ್… ಬಟ್ ನಾಟ್ ಸೇಮ್ ಫಾದರ್” ಎನ್ನುವ ಡೈಲಾಗ್ ಪುನಃ ಪ್ರಸ್ತಾಪಗೊಂಡಿದ್ದು, ಇದು ಯಾರಿಗೆ ಹೇಳಿದ್ದಾರೋ ಎಂಬ ಕುತೂಹಲ ಹುಟ್ಟಿಸಿದೆ.
ಕೊನೆಯ ಭಾಗದಲ್ಲಿ ಬರುವ “ಸೂರ್ಯನಿಗೆ ತುಂಬಾ ಹೊತ್ತು ಗ್ರಹಣ ಹಿಡಿಯೋದಿಲ್ಲ… ನಾನು ಬರ್ತಿನಿ ಚಿನ್ನಾ“ ಎನ್ನುವ ಡೈಲಾಗ್ ದರ್ಶನ್ ಅವರ ಇತ್ತೀಚಿನ ಪರಿಸ್ಥಿತಿಗೆ ಕನೆಕ್ಟ್ ಆಗುವಂತಿದೆ ಎಂಬ ಅಭಿಮಾನಿಗಳ ಅಭಿಪ್ರಾಯವಾಗಿದೆ.
- ಪಾತ್ರ ಪರಿಚಯಗಳು: ಟ್ರೈಲರ್‌ನ ಮತ್ತೊಂದು ಹೈಲೈಟ್
ಟ್ರೈಲರ್‌ನಲ್ಲಿ ಪ್ರಮುಖ ಪಾತ್ರಗಳನ್ನೂ ವೇಗವಾಗಿ ಪರಿಚಯಿಸಿ, ಸಿನಿಮಾದ ಟೋನ್ ಅನ್ನು ಸ್ಪಷ್ಟಪಡಿಸಲಾಗಿದೆ. ಅಚ್ಯುತ್ ಕುಮಾರ್, ರಚನಾ ರೈ, ಮಹೇಶ್ ಮಾಜ್ರೇಕರ್ ಅವರ ಪಾತ್ರಗಳು ಅತಿ ಕಡಿಮೆ ಸಮಯದಲ್ಲೇ ಗಮನ ಸೆಳೆಯುತ್ತವೆ.
- ಸ್ಟೈಲಿಶ್ ಲುಕ್‌ನಲ್ಲಿ ದರ್ಶನ್
ಟ್ರೈಲರ್‌ನಲ್ಲಿ ದರ್ಶನ್ ಅತ್ಯಂತ ಸ್ಟೈಲಿಷ್, ಹ್ಯಾಂಡ್ಸಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಮ್ಯಾಸ್ ಅಟ್ಟಿಟ್ಯೂಡ್ ಜೊತೆಗೆ ಕ್ಲಾಸಿ ಸ್ಟೈಲ್ ಮಿಶ್ರಣದಂತೆ ಸಜ್ಜಾಗಿದೆ.
ಮಿಲನಾ ಪ್ರಕಾಶ್ ಅವರ ದೃಷ್ಟಿಯಲ್ಲಿ ಸಿನಿಮಾ ಮೂಡಿಬರುತ್ತಿದೆ ಎಂದು ಟ್ರೈಲರ್‌ನಲ್ಲೇ ಸ್ಪಷ್ಟವಾಗಿದೆ.
ದರ್ಶನ್ ಪಾತ್ರ ‘ಡೆವಿಲ್’ ಎಂಬ ಹೆಸರಿನ ಹಿಂದಿರುವ ಕಾರಣ ಟ್ರೈಲರ್‌ನ ಮರ್ಮ. ಪಾತ್ರಗಳ ನಡುವಿನ ಸಂಘರ್ಷ, ಮ್ಯಾಸ್ ಡೈಲಾಗ್‌ಗಳು ಮತ್ತು ಗಾಢವಾದ ಕಥನಶೈಲಿ ಸಿನಿಮಾವಿನ ಟೋನ್ ಅನ್ನು ಬಲಪಡಿಸುತ್ತವೆ. ಈ ಒಂದು ಟ್ರೈಲರ್ ಮಾತ್ರದಿಂದಲೇ ಸಿನಿಮಾ ಕುರಿತು ದೊಡ್ಡ ಮಟ್ಟದ ಹೈಪ್ ಸೃಷ್ಟಿಯಾಗಿದ್ದು, ಅಭಿಮಾನಿಗಳ ನಿರೀಕ್ಷೆ ಇನ್ನಷ್ಟು ಏರಿದೆ.


