ಇಂದು ಫಸ್ಟ್ ಸ್ಯಾಲರಿ ಕಿರುಚಿತ್ರ ಬಿಡುಗಡೆ
ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ
ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅವರ ಪುತ್ರ ಪವನ್ ವೆಂಕಟೇಶ್ ನಿರ್ದೇಶಿಸಿದ “ಫಸ್ಟ್ ಸ್ಯಾಲರಿ”ಕಿರುಚಿತ್ರ ಇಂದು ಬಿಡುಗಡೆಯಾಗಲಿದೆ.
ಹೌದು, ಇಂದು ಮಧ್ಯಾಹ್ನ 3-30 ಕ್ಕೆ ಜಿ ಟಿ ಮಾಲ್ ನ ಎಂಎಂಬಿ ಲೇಗೆಸಿ ಅಲ್ಲಿ ಕಿರುಚಿತ್ರದ ಪ್ರದರ್ಶನವಿದ್ದು, ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತೆ ಡಾ.ವಿಜಯಾ, ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ಕಲಾವಿದೆ ಶ್ರೀಮತಿ ಶೃತಿ, ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪ್ರದರ್ಶನ ನಂತರ 4:30 ಕ್ಕೆ Raghavendra Chitra Vaani YouTube Channel ನಲ್ಲಿ ಕಿರುಚಿತ್ರ ಬಿಡುಗಡೆಯಾಗಲಿದೆ.
“ಫಸ್ಟ್ ಸ್ಯಾಲರಿ” ಕಿರುಚಿತ್ರದ ತಾರಾಗಣದಲ್ಲಿ ಹಿರಿಯ ಕಲಾವಿದೆ ಹರಿಣಿ ಶ್ರೀಕಾಂತ್, ವಿಜಯ್ ಶಿವಕುಮಾರ್, ಯತೀರಾಜ್, ತ್ರಿಶುಲ್, ಸ್ನೇಹರ್ಷಿ, ರಕ್ಷಿತ್ ಅಭಿನಯಿಸಿದ್ದಾರೆ.
ಇನ್ನು ಈ ಕಿರುಚಿತ್ರ ಡಿ ವಿ ಸುಧೀಂದ್ರ ಅವರ ಆಶೀರ್ವಾದೊಂದಿಗೆ, ರಾಘವೇಂದ್ರ ಚಿತ್ರವಾಣಿ ಅರ್ಪಿಸುವ, ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ನಿರ್ಮಾಣದಲ್ಲಿ, ಪವನ್ ವೆಂಕಟೇಶ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ವಿಜಯ್ ಶಿವಕುಮಾರ್ ಅವರ ರಚನೆ, ರಿಚರ್ಡ್ ಡ್ಯಾನಿಯಲ್ ಅವರ ಛಾಯಾಗ್ರಹಣ ಹಾಗೂ ಸಂಕಲನ, ವಿಜಯ್ ಹರಿತ್ವ ಅವರ ಸಂಗೀತ ನಿರ್ದೇಶನ, ನಿರ್ದೇಶನ ತಂಡದಲ್ಲಿ ಮನೋಜ್ ಕುಮಾರ್ ಎಚ್ ಎನ್, ರವಿ ಸಾಸನೂರ್, ಮಣಿ ಅವರ ಪ್ರಚಾರ ಕಲೆ, ಡಿ ಎಸ್ ಸುನೀಲ್ ಸುಧೀಂದ್ರ ವೆಂಕಟೇಶ್,ಮತ್ತು ಡಿ ಜಿ ವಾಸುದೇವ್ ಅವರ ಪತ್ರಿಕಾ ಸಂಪರ್ಕ, ಚಂದನ ಪ್ರಸನ್ನ ಅವರ ಡಿಜಿಟಲ್ ಮಾರ್ಕೆಟಿಂಗ್ ಹೀಗೆ ಅನೇಕರು ತಂತ್ರಜ್ಞಾನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ.


